eyes

eyes
eyes forever mine

Tuesday, April 13, 2010

ನಿನ್ ಕಣ್ಣ ಹನಿ . . .


ನಿನ್ನ ಕಣ್ಣ ಹನ್ನಿಯೊಂದು ನಾ ಆಗಲೇನು ?
ಕಣ್ಣ ರೆಪ್ಪೆಯೊಳಗೆ ನಾ ಉಳಿಯಲೇನು ?

ನಿನ್ನ ಕಣ್ಣ ಕಾಂತಿಯಲ್ಲಿ ನಾ ಹೊಳೆಯಲೇನು ?
ನನ್ನ ದೈವ ನೀನು, ಈ ಜೀವ ನೀನು

ನಿನ್ನ ವದನದಿ ನಾ ಕಲೆಯಾಗಲೇನು ?
ನನ್ನ ದೃಷ್ಟಿ ನೀನು, ನೀನಲವೇನು ?

ನಿನ್ನ ಮುಗುಳ್ನಗೆಯಲ್ಲಿ ನಿನ್ನ ನಾ ಕಾಣಲೇನು ?
ಮಂದಹಾಸ ನೀನು ನನ್ನೊಲವು ನೀನು

ಹೃದಯಂಥರಾಳದಲ್ಲಿ; ಆ ಕಣ್ಣ ಸನ್ನೆಯಲ್ಲಿ,
ಜೀವ ತುಂಬಿಕೊಂಡಂತೆ ನಾ ನಿಲ್ಲಲೇನು ?


ಈ ನಯನ ನೋಟದಲ್ಲಿ; ಆ ಹನಿಯ ಅಂಶದಲ್ಲಿ;
ಹೊಸತನ ಕಂಡಂತೆ ನಾ ಇರಲೇನು ?

ಆ ತಾವರೆ ಕಣ್ಣಲ್ಲಿ; ಮಧುಪಾನದ ಮತ್ತಿನಲ್ಲಿ;
ನಾ ಮರೆತು ಹೋಗಲೇನು ? ನಿನ್ ಒಳ ಕಣ್ಣು ನಾನು !

No comments:

Post a Comment