eyes

eyes
eyes forever mine

Saturday, October 31, 2009

... ನನ್ನನೇ ಮರೆತೇ

ಈ ಕಂಗಳ ಆ ಮಿಂಚಲಿ ನಾ ಕರಗಿ ಹೋದೇ ... ನನ್ನನೇ ಮರೆತೇ;
ನಿನ್ ಅಂದವ ಕಣ್ಣ ತುಂಬಿಕೊಂಡೆ ... ನನ್ನನೇ ಮರೆತೇ.

ದೀವಿಗೆಯಂಥ ಆ ನಿನ್ನ ಕಣ್ಣ ಕಂಡಿಹನೆ ಚಂದ್ರ; ನಾಚಿ ಮರೆಯಾದ ನನ್ನ ಬಾಳಲಿ;
ಜೀವನವೇ ಕನ್ನಡಿಯಂತೆ ನಿಂತಿದೆ ನನ್ನ ಎದುರು; ಹೇಳು ನಾ ಮರೆ ಮಾಚಿ ಹೋಗಲೆಲ್ಲಿ ?
ಹಂಸ ವರ್ಣದ ಆಕಾಶದಿ ಶ್ಯಾಮಾ ಚಂದ್ರ ಮೂಡಲಿ ...

ಆ ಕಂಗಳ ಕುಡಿ ನೋಟದಿ ನಾ ಬೆರೆತು ಹೋದೆ ... ನನ್ನನೇ ಮರೆತೇ;
ಈ ಅನುಭವ ನಾ ಸವಿಧು ನಿಂತೆ ... ನನ್ನನೇ ಮರೆತೇ.

ಬಾಳೆಂಬ ಕತ್ತಲಿಗೆ ನೀ ಶ್ವೇತ ತುಂಬಿ; ವೇದಾಂತಿಯ ಬಾಳು ಹೋಯಿತ್ತೆಲಿ ?
ಮುಂಗಾರಿನ ಮಂಜು ಅಂದು ಕವಿದು, ಸರಿದದ್ದು ಇಂದು; ಕವಿ ಕಲ್ಪನೆ ತಿಳಿಯಲ್ಲೆಲಿ ?
ಹಸಿಯಾದ ಆ ನಿನ್ನ ನಯನ; ಹರ್ಷವನ್ನೇ ಕಾಣಲಿ ...

ಆ ಮತ್ಸ್ಯ ದ, ಜೋಡಿಯ ನೋಡಿ, ನಾ ಕಳೆದು ಹೋದೆ ... ನನ್ನನೇ ಮರೆತೇ;
ಈ ಕನ್ಯೆಯ ಆ ಪ್ರೇಮದಿ ನಾ ಮುಳುಗಿ ಹೋದೆ ... ನನ್ನನೇ ಮರೆತೇ.